ಏವೀಸ್ ನಿಮ್ಮ JPEG ಗಳು ಮತ್ತು MP4 ಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ನಿಭಾಯಿಸಬಲ್ಲದು, ಅಲ್ಲದೆ ವಿಶಿಷ್ಟವಾದ ಬಹು-ಪುಟ TIFFಗಳು, SVGಗಳು, ಹಳೆಯ AVIಗಳು ಮತ್ತು ಹಲವು ಪ್ರಕಾರಗಳನ್ನು ಕೂಡ ಬೆಂಬಲಿಸುತ್ತದೆ ಇದು ಚಲನೆಯ ಫೋಟೋಗಳು, ಪನೋರಮಾಗಳು (ಫೋಟೋ ಗೋಳಗಳು) 360° ವೀಡಿಯೊಗಳು, ಹಾಗೆಯೇ GeoTIFF ಕಡತಗಳನ್ನು ಗುರುತಿಸಲು ನಿಮ್ಮ ಮಾಧ್ಯಮ ಸಂಗ್ರಹವನ್ನು ಸ್ಕ್ಯಾನ್ ಮಾಡುತ್ತದೆ.
ನ್ಯಾವಿಗೇಷನ್ ಮತ್ತು ಹುಡುಕಾಟ ಏವೀಸ್ನ ಒಂದು ಪ್ರಮುಖ ಭಾಗವಾಗಿದೆ. ಬಳಕೆದಾರರು ಆಲ್ಬಮ್ಗಳಿಂದ ಫೋಟೋಗಳಿಂದ ಟ್ಯಾಗ್ಗಳಿಗೆ ನಕ್ಷೆಗಳಿಗೆ ಸುಲಭವಾಗಿ ಹರಿಯುವುದು ಗುರಿಯಾಗಿದೆ.
ಎವೀಸ್ ಆಂಡ್ರಾಯ್ಡ್ (ಟಿವಿ ಸೇರಿದಂತೆ) ನೊಂದಿಗೆ ಸಂಯೋಜಿಸುತ್ತದೆ, ಉದಾಹರಣೆಗೆ ವಿಜೆಟ್ಗಳು, ಆ್ಯಪ್ ಶಾರ್ಟ್ಕಟ್ಗಳು, ಸ್ಕ್ರೀನ್ ಸೇವರ್ ಮತ್ತು ಜಾಗತಿಕ ಹುಡುಕಾಟ ನಿರ್ವಹಣೆ. ಇದು ಮೀಡಿಯಾ ವೀಕ್ಷಕ ಮತ್ತು ಪಿಕ್ಕರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.